ಹಿಮಾಚಲ ಎಕ್ಸಿಟ್ ಪೋಲ್ : ಕಾಂಗ್ರೆಸ್ ಸದೆಬಡಿಯಲಿದೆ ಬಿಜೆಪಿ | Oneindia Kannada

2017-12-14 207

ನವದೆಹಲಿ, ಡಿಸೆಂಬರ್ 14 : ಹಿಮಾಚಲ ಪ್ರದೇಶದಲ್ಲಿ ಟೈಮ್ಸ್ ಆಫ್ ಇಂಡಿಯಾ ಆನ್ ಲೈನ್ ಮತ್ತು ಸಿವೋಟರ್ ನಡೆಸಿರುವ ಚುನಾವಣೋತ್ತರ ಸಮೀಕ್ಷೆಯಲ್ಲಿ ಭಾರತೀಯ ಜನತಾ ಪಕ್ಷ ಜಯಭೇರಿ ಬಾರಿಸಲಿದ್ದು, ಕಾಂಗ್ರೆಸ್ಸಿಗೆ ಮಣ್ಣು ಮುಕ್ಕಿಸಲಿದೆ.68 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 41 ಸ್ಥಾನಗಳನ್ನು ಗಳಿಸಿ ಸರಳ ಬಹುಮತ ಪಡೆಯಲಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಹಿಮಾಚಲ ಪ್ರದೇಶದಾದ್ಯಂತ ಕೇಸರಿ ಧ್ವಜಗಳು ಹಾರಾಡಲು ಆರಂಭಿಸಿವೆ. ಫಲಿತಾಂಶ ಡಿಸೆಂಬರ್ 18ರಂದು ತಿಳಿದುಬರಲಿದೆ.ಈಗ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ಸಿಗೆ ಈ ಚುನಾವಣೋತ್ತರ ಫಲಿತಾಂಶ ಭಾರೀ ನಿರಾಶೆ ಹುಟ್ಟಿಸಿದೆ. 36 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಸಂಖ್ಯೆ 25ಕ್ಕೆ ಇಳಿಯಲಿದೆ. ಈ ಬಾರಿ ಫಲಿತಾಂಶ ತಿರುವುಮುರುವು ಆಗಲಿದ್ದು, ಬಹುಮತಕ್ಕೆ ಬೇಕಾಗಿರುವ 35 ಸೀಟುಗಳನ್ನು ಮೀರಿ ಸ್ಥಾನಗಳನ್ನು ಬಿಜೆಪಿ ಗಳಿಸಲಿದೆ.ಬಿಜೆಪಿಯ ಮತಗಳಲ್ಲಿ ಕೂಡ ಗಣನೀಯ ಏರಿಕೆ ಕಂಡುಬಂದಿದ್ದು, 2012ರಲ್ಲಿ ಶೇ.38.5ರಷ್ಟು ಮತ ಪಡೆದಿದ್ದರೆ, 2017ರಲ್ಲಿ ಮತ ಗಳಿಕೆಯ ಸಂಖ್ಯೆ ಶೇ.47.6ಕ್ಕೆ ಏರಲಿದೆ. ಕಾಂಗ್ರೆಸ್ ಮತಗಳಿಕೆ ಏರಿದ್ದರೂ, 11ರಷ್ಟು ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಇತರ ಪಕ್ಷಗಳು ಹೇಳಹೆಸರಿಲ್ಲದಂತೆ ನಿರ್ನಾಮವಾಗಿವೆ.

Results of Himachal Pradesh Exit Poll 2017 are out now. Read latest updates related to exit poll done by TOI online-CVoter. BJP will get majority.